Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BOMBAY HALWA ಬಾಂಬೆ ಹಲ್ವಾ

ಬಾಂಬೆ ಹಲ್ವದ ಬಣ್ಣ, ರುಚಿಗೆ ಮನ ಸೋಲದವರರಿಲ್ಲ!

ಮಾಡುವ ವಿಧಾನ:-

1 ಲೋಟ ಕಾರ್ನ್ ಫ್ಲೋರ್ ಗೆ 3 ಲೋಟ ನೀರು ಹಾಕಿ ಗಂಟಿಲ್ಲದೆ ಕಲೆಸಿಡಿ.

ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ.

1 1/2 ಅಥವಾ 1 3/4 ಲೋಟ ಸಕ್ಕರೆಯನ್ನು ದಪ್ಪ ತಳದ ಬಾಣಲೆಯಲ್ಲಿ 1 ಲೋಟ ನೀರು ಹಾಕಿ ಕರಗಲು ಇಡಿ. ಸಕ್ಕರೆ ಪೂರ ಕರಗಿದ ಮೇಲೆ ಸ್ವಲ್ಪ ನಿಂಬೆ ರಸ ಹಾಕಿ ಕಾರ್ನ್ ಫ್ಲೋರ್ ಮಿಶ್ರಣ ಮತ್ತೊಮ್ಮೆ ಕಲೆಸಿ ಸಕ್ಕರೆ ಪಾಕಕ್ಕೆ ಹಾಕಿ 2 ಚಮಚ ತುಪ್ಪ ಹಾಕಿ ಕೈ ಬಿಡದೆ ಕಲೆಸುತ್ತಿರಿ.

      

ಮಿಶ್ರಣ ಸ್ವಲ್ಪ ಗಟ್ಟಿಯಾದಾಗ 3 ಚಮಚ ತುಪ್ಪ ಹಾಕಿ ಕಲೆಸುತ್ತಲೇ ಇರಿ. ಉರಿ ಕಡಿಮೆ ಇರಲಿ.

   

ಮತ್ತೆರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ ಹೆಚ್ಚಿದ ಗೋಡಂಬಿ, ಬಾದಾಮಿ, ಚಿಟಿಕೆ ಕೇಸರಿ ಬಣ್ಣ ಹಾಕಿ ಕಲೆಸಿ ಮಿಶ್ರಣ ಒಂದೇ ಉಂಡೆಯಂತಾಗಿ, ಪಾರದರ್ಶಕವಾಗಿ ( Transparent) ತುಪ್ಪ ಹೊರ ಬರಲು ಪ್ರಾರಂಭವಾದಾಗ ತುಪ್ಪ ಸವರಿದ ಟ್ರೇಗೆ ಹಾಕಿ ಮೇಲೆ ಸ್ವಲ್ಪ ಹೆಚ್ಚಿದ ಗೋಡಂಬಿ, ಬಾದಾಮಿ ಹಾಕಿ ಒತ್ತಿ ತಣ್ಣಗಾದ ನಂತರ Fridge ನಲ್ಲಿ 1 ಗಂಟೆ ಇಟ್ಟು ನಂತರ ನಿಮಗೆ ಬೇಕಾದ ಅಳತೆ, ಆಕಾರದಲ್ಲಿ ಕತ್ತರಿಸಿ ಸವಿಯಿರಿ.

   

ಸಕ್ಕರೆ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ ಮಾಡಿ. ನಾನು ಬಣ್ಣ ಹಾಕದೆ ಸ್ವಲ್ಪ ಮಾಡಿದ್ದೇನೆ, Liquid food colours ಹಸಿರು, ಹಳದಿ ಬಣ್ಣ ಸಿಗುತ್ತದೆ, ನೀವು ಬೇಕಾದರೆ ಉಪಯೋಗಿಸಬಹುದು.

ಧನ್ಯವಾದಗಳು.

Leave a Reply

Your email address will not be published.