Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BADAM POORI ಬಾದಾಮ್ ಪೂರಿ

ದೀಪಾವಳಿ ಹಬ್ಬದ ವಿಶೇಷ ಸುಲಭವಾಗಿ ಮಾಡಬಹುದಾದ ಸಿಹಿ!

ಮಾಡುವ ವಿಧಾನ:-

2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. 1 ಎಳೆ ಪಾಕ ಬಂದೊಡನೆ ಒಲೆಯಿಂದ ಇಳಿಸಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ.

1 ಲೋಟ ಮೈದಾ ಹಿಟ್ಟಿಗೆ, 2 ಚಮಚ ತುಪ್ಪ ಬಿಸಿ ಮಾಡಿ ಹಾಕಿ. ಚಿಟಿಕೆ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಬಾದಾಮ್ ಪೂರಿ ಅಂದ ಮೇಲೆ ಬಾದಾಮಿ ಹಾಕದಿದ್ದರೆ ಹೇಗೇ?! 1/4 ಲೋಟ ಬಾದಾಮಿ ನುಣ್ಣಗೆ ಪುಡಿ ಮಾಡಿ ಹಾಕಿ. ಸಮಯವಿದ್ದರೆ ಬಾದಾಮಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ ಹಾಕಬಹುದು. ಬಾದಾಮಿ Optional ಬೇಕಾದರೆ ಹಾಕಿ. ಚಿಟಿಕೆ ಅರಿಶಿಣ ಸೇರಿಸಿ ಚೆನ್ನಾಗಿ ಮತ್ತೊಂದು ಬಾರಿ ಕಲೆಸಿ.

   

ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ ಹತ್ತು ನಿಮಿಷ ಮುಚ್ಚಿಡಿ. ಕೆಲವರು ಕೇಸರಿ ಬಣ್ಣ ಹಾಕುತ್ತಾರೆ. ನಾನು ಚಿಟಿಕೆ ಅರಿಶಿಣ ಹಾಕಿ ಮಾಡಿದ್ದೇನೆ.

ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ತೆಳ್ಳಗೆ ಪೂರಿ ಲಟ್ಟಿಸಿ ಮಧ್ಯದಲ್ಲಿ ಮಡಚಿ. ಮತ್ತೊಂದು ಬಾರಿ ಮಡಚಿ ಅಂಚುಗಳನ್ನು ಸ್ವಲ್ಪ ಒತ್ತಿ, ಮಧ್ಯದಲ್ಲಿ ಒಂದು ಲವಂಗ ಸಿಕ್ಕಿಸಿ

   

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ನಂತರ ಉರಿ ಪೂರ್ತಿಯಾಗಿ ಕಡಿಮೆ ಮಾಡಿ ಲಟ್ಟಿಸಿದ ಬಾದಾಮಿ ಪೂರಿಗಳನ್ನು ಹಾಕಿ ಕೆಂಪಗೆ ಗರಿ ಗರಿಯಾಗಿ ಆಗುವವರೆಗೆ ಕರಿದು, ಸಕ್ಕರೆ ಪಾಕದಲ್ಲಿ ಹಾಕಿ 1 ಅಥವಾ 2 ನಿಷದ ನಂತರ ತೆಗೆದಿಡಿ.

   

ಮೇಲೆ ಬೇಕಾದರೆ ಒಣ ಕೊಬ್ಬರಿ ತುರಿ ಹಾಕಿ ಅಲಂಕರಿಸಿದರೆ ರುಚಿಯಾದ ಬಾದಾಮಿ ಪೂರಿ ಸವಿಯಲು ಸಿದ್ಧ!

ಧನ್ಯವಾದಗಳು.

Leave a Reply

Your email address will not be published.