MASALA PAPPAD ಮಸಾಲಾ ಪಾಪ್ಪಡ್
ಹೋಟೆಲ್ ಗಳಿಗೆ ಹೋದಾಗ ಮರೆಯದೆ ತಿನ್ನುವ Starter! ಮನೆಯಲ್ಲಿಯೇ ಸುಲಭವಾಗಿ, ರುಚಿಯಾಗಿ, ಶುಚಿಯಾಗಿ ಮಾಡುವ ವಿಧಾನ ಇಲ್ಲಿದೆ! ಮೆಣಸು ಹಾಕಿರುವ ಹಪ್ಪಳಗಳನ್ನು ಎಣ್ಣೆಯಲ್ಲಿ ಕರಿದಿಡಿ/ Oven ನಲ್ಲಿ ಸುಟ್ಟಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಕ್ಯಾರೆಟ್ ತುರಿದಿಡಿ. 4 ಚಮಚ ತೆಂಗಿನ ಕಾಯಿ ತುರಿದಿಡಿ. ಕೊತ್ತಂಬರಿ ಸೊಪ್ಪು ಸ್ವಲ್ಪ ಸಣ್ಣಗೆ ಹೆಚ್ಚಿಡಿ. ಮೇಲೆ ಕೊಟ್ಟಿರುವ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, 1 ಚಮಚ ಖಾರಾದ ಪುಡಿ, ಉಪ್ಪು, …