VEG PALAV ( No garlic & Onion) ವೆಜ್ ಪಲಾವ್ ( ಬೆಳ್ಳುಳ್ಳಿ, ಈರುಳ್ಳಿ ರಹಿತ)
ಸಾಮಾನ್ಯವಾಗಿ ಪಲಾವ್ ಮಾಡುವಾಗ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಮಾಡುತ್ತಾರೆ! ಬೆಳ್ಳುಳ್ಳಿ, ಈರುಳ್ಳಿ ಹಾಕದೆ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆಪೆಸಿ, ನಂತರ ನೀರು ಸೋರಿ ಹಾಕಿಡಿ. 1 ಕಟ್ಟು ಪುದೀನಾ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಣ್ಣಗೆ ಹೆಚ್ಚಿಡಿ. 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1/2 ಟೀ ಚಮಚ ಕರಿ …