ALU MATTAR ಆಲೂ ಮಟರ್
ಆಲೂಗೆಡ್ಡೆ ಮತ್ತು ಬಟಾಣಿಯ ಸೂಪರ್ ಕಾಂಬಿನೇಶನ್! ಚಪಾತಿ, ಪುಲ್ಕಾ, ರೋಟಿ ಎಲ್ಲದರೊಂದಿಗೂ ಒಳ್ಳೆಯ ಕಾಂಬಿನೇಶನ್! ಮಾಡುವ ವಿಧಾನ:- 1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಹಸಿ ಬಟಾಣಿಯೊಂದಿಗೆ ಬೇಯಿಸಿಡಿ. 1 ಈರುಳ್ಳಿ, 2 ಟೋಮೋಟೋ, 4 ಎಸಳುಬೆಳ್ಳುಳ್ಳಿ, 1/2 ಶುಂಠಿ ಸಣ್ಣಗೆ ಹೆಚ್ಚಿ, 2 ಚಮಚ ಎಣ್ಣೆ, ಸ್ವಲ್ಪ ಗೋಡಂಬಿ ಹಾಕಿ ಹುರಿದು, ನುಣ್ಣಗೆ ರುಬ್ಬಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ ಜೀರಿಗೆ, ಅರಿಷಿಣ ಪುಡಿ ಹಾಕಿ ಹುರಿದು …